Wednesday, 4 December 2019

ದಾಸರು ಮತ್ತು ಕವಿಗಳು

ದಾಸ ಸಾಹಿತ್ಯ ಅನೋದು ಬರೇ ಸಾಮಾಜಿಕ ಪರಿವರ್ತನೆಗಾಗಿ ಮೂಡಿ ಬಂದ ಚಳುವಳಿ ಅಲ್ಲಾ. 
ಹಾಗೆ ಬರೇ ಅಧ್ಯಾತ್ಮಕ್ಕಾಗಿ ಬಂದ ಮಡಿ ವಸ್ತುವು ಅಲ್ಲಾ. 
ದಾಸ ಸಾಹಿತ್ಯ ಅನ್ನೋದು ಆ "ವೀರ" ಮಧ್ವ ಯತಿಯ ಸಿಧಾಂತವನ್ನು ಜನರ ಮನೆ ಮನೆಗೆ ತಲುಪಿಸಿವಂತಹ ಮಾಧ್ಯಮ. 
ಇಲ್ಲಿ ಸಾಮಾಜಿಕ ಕಳಕಳಿಯೂ ಉಂಟು ಹಾಗು ಆ ಸರ್ವೋತ್ತಮನ  ಒಲಿಸಿಕೊಳ್ಳೋ ಮಾರ್ಗವು ಉಂಟು. 
ಬರಿಯುವ ಪಾಂಡಿತ್ಯವಿದೆ ಎಂದು ದಾಸರು ಬರದದಲ್ಲ. 
ಕನಕ ದಾಸರ ಒಂದು ಪದ ನೆನಪಾಗುತ್ತೆ 
ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು , ಈ
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು||
ಈಗಿನ ರಸಋಷಿಗಳು, ವಿಶ್ವಮಾನವರು, ವಾರಕವಿಗಳು, ಗಾರುಡಿಗರು  ಥರ, ಸುಖಾ ಸುಮ್ಮನೆ ಅಂಕಿತವನಿಟ್ಟುಕೊಂಡು ಬರೆದವರಲ್ಲ.
ಆಶ್ಚರ್ಯವೇನೆಂದರೆ ದಾಸರ ಯಾವತ್ತು ಪೆನ್ನು ಮತ್ತು ಪುಸ್ತಕ ಹಿಡಿದು ಕೂತು ಇವತ್ತು ನಾನು ಈ ಪದ್ಯ ಬರದೇ ತೀರಬೇಕು ಅಂತಾ ಸರ್ವಥಾ ಬರೆದವರಲ್ಲ. 
ಅವರ ಮನದಿಂದ ನೇರ ಸ್ಪುಟವಾದ ಭಕ್ತಿಯ ನುಡಿ ಮುತ್ತುಗಳು ಇವು.
ರವಿ ಕಾಣದು ಕವಿ ಕಾಣುತ್ತಾನೆ ಅಂತ ಮಾತಿದೆ.
ಆದರೆ ಕವಿ ದೇವರನ್ನು ಕಂಡಿದಾನೋ? 
ಕನಕ ದಾಸರ ಪದ್ಯಕ್ಕೆ ಪೂರಕವಾಗಿ ಪ್ರಸನ್ನ ವೆಂಕಟದಾಸರ ಪದ್ಯವು ಇದೆ
ಹಲವು ಕವಿಗಳಿಗೆ ನಿಲುಕದ  ಆನೆ
ಬಲ ಪ್ರಸನ್ವೆಂಕಟನಿಲಯನೆಂಬಾನೆ||
ಇಲ್ಲಿ ಆನೆ ಎಂದರೆ ಪರಮಾತ್ಮ. 
ಕವಿಗಳಿಗೂ ಮತ್ತು ದಾಸರಿಗೂ ತುಂಬಾ ವ್ಯತ್ಯಾಸ ಇದೆ. 
ಕವಿ ಕಾಣದ ವಸ್ತುವನ್ನು,  ಶಬ್ದಗಳ ಮೂಲಕ ಅಲಂಕರಿಸಿ ಬರೆದರೆ, ದಾಸರು ಕಂಡ್ದಿದನ್ನೇ 'ಅಲಂಕರಿಸದೆ' ಬರೆದವರು. 
ದಾಸರೇನು ಛಂದಸ್ಸು ಮತ್ತು ವ್ಯಾಕರಣಗಳನ್ನು  ಧ್ಯಾನದೊಳ್ಳಗಿಟ್ಟು ಅದನ್ನು ತಪ್ಪದ ಹಾಗೆ, ರಾಗ ಶ್ರುತಿಗಳ ತಾಳ ಮೇಳಗಳ ಪರಿವಿಡಿಯಲ್ಲಿ ಬರೆದವರಲ್ಲ. 
ದಾಸರು ಬರೆದದ್ದೇ ವ್ಯಾಕರಣ ಹಾಡಿದ್ದೇ ರಾಗ ಅನುಸರಿಸಿದ್ದೇ ವ್ಯಾಕರಣ. 
ಇಂದಿಗೂ ಪದಗಳನ್ನು ನೋಡಿದರೆ ಆಶ್ಚರ್ಯವಾಗುವಂತಹ ವ್ಯಾಕರಣ ಅದರಲ್ಲಿದೆ. 
ಷಟ್ಪದಿಯ ಛಂದಸ್ಸಿನಲ್ಲಿ ಬಂದ ಹರಿಭಕ್ತಿಸಾರ ಮತ್ತು ಹರಿಕಥಾಮೃತಸಾರಕ್ಕೆ  ಮಿಕ್ಕಾವ ಪದ್ಯಗಳು ಸಮಾನ ಹೇಳಿ  ನೋಡೋಣ?
ಹೌದು,  ಈ ದಾಸರನ್ನ ಹೇಗೆ ಗುರಿತಿಸೋದು? 
ಅದಕ್ಕೂ ನಮ್ಮ ವಿಜಯದಾಸರು ಮಾರ್ಗ ತೋರಿಸಿದ್ದಾರೆ 
ಹರಿದಾಸನಾದರೆ ಹ್ಯಾಂಗಿರಲಿ ಬೇಕು
ನರಲೋಕದ ಚಿಂತೆ ಬಿಟ್ಟುಕೊಡಬೇಕು ||ಪ||
ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು
ಮರುತನೆ ಜಗಕೆ ಗುರುವೆನಲಿ ಬೇಕು
ಪುರಂದರದಾಸರೇ ದಾಸರೆಂದನ ಬೇಕು
ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು||

ದಾಸ ಸಾಹಿತ್ಯ ಬರೇ ಸಾಹಿತ್ಯ ಆಗದಿರಲಿ ನಮ್ಮ ಜೀವನದಲ್ಲಿ ಅದರ ಇಂಪನ್ನು ಹರಿಡಿಸಿ ಅದರ ತತ್ವವನ್ನು ತಿಳಿಯೋಣ. 



No comments:

Post a Comment