"ಜನ ಸೇವೆಯೇ ಜನಾರ್ಧನನಿಗೆ ಕೊಡುವ ಟ್ಯಾಕ್ಸ್" ಎಂದು ಯಾವಾಗಲು ಹೇಳುತ್ತಿದ್ದರು.
ತುಂಬಾ ಜನಕ್ಕೆ ಗೊತ್ತಿಲ್ಲ, ನಮ್ಮ ನಾಡ ಗೀತೆಯಲ್ಲಿ ಆಚಾರ್ಯ ಮಧ್ವರ ಹೆಸರು ಇದ್ದಿದಿಲ್ಲ, ಪೇಜಾವರರೇ ಸ್ವತಃ ಆಗಿನ ಸರ್ಕಾರದ ಜೊತೆಗೆ ವಾದಮಾಡಿ ಮಧ್ವಾಚಾರ್ಯರ ಹೆಸರು ಸೇರಿಸಿದ್ದು.
ಅವರ ಮಿಂಚಿನಂತೆ ಇದ್ದ ಸಂಚಾರ, ಆ ತೇಜಸ್ಸು, ಆ ವರ್ಚಸ್ಸು, ಆ ಪ್ರಖರ ನಡೆಗಳು, ಆ ನೇರ ಮಾತುಗಳು, ಎಷ್ಟೇ ವಿರೋಧಗಳು ಇದ್ದರು ಅವರ ನಿಲುವೇ ಕೊನೇಯದ್ದು.
ಅಬ್ಬಾ! ನಮ್ಮ ಗುರುಗಳು ಏನಿದಿಲ್ಲ ಹೇಳಿ?
ಅವರ ರಾಮ ಜನ್ಮ ಭೂಮಿ ಚಳುವಳಿಗೆ ರಾಮನೇ ಪ್ರೀತಿಯಿಂದ ಮರಳಿ ಬಂದಿರಬಹುದು.
ಅವರು ಸ್ಥಾಪಿಸಿದ ಪೂರ್ಣಪ್ರಜ್ನ್ಯ ವಿದ್ಯಾಪೀಠ ಅದೆಷ್ಟು ವಿದ್ವಾಂಸರನ್ನ ಹುಟ್ಟಿಸಿದೆಯೋ.
ಮಧ್ವ ಮಂಡಲವನ್ನು ಸ್ಥಾಪಿಸಿ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಆಶ್ರಯವಿತ್ತು ತಮ್ಮ ಜೀವನ ತುಂಬಾ ವಿದ್ಯಾ ದಾನವನ್ನು ಮಾಡಿದ್ದಾರೆ.
ನಾವು ಶ್ರೀವಾದಿರಾಜರ, ಶ್ರೀವ್ಯಾಸರಾಜರಂತಹ ಯತಿಗಳ ಸಾಮಾಜಿಕ ಕಳಕಳಿಯ ಬಗ್ಗೆ ಓದಿದ್ದು ಕೇಳಿದ್ದು ಅಷ್ಟೇ, ಆದರೇ ಅದು ಪೇಜಾವರರ ಮುಖಾಂತರ ನೋಡಿದ್ದೀವಿ.
ಶೂದ್ರರು ಮೇಳು ಕೀಳು ಅಂತೆಲ್ಲ ನೋಡದೆ ಅವರ ಮನೆಗೆ ಪಾದ ಪೂಜೆಗೆ ಹೋದವರು.
ಇನ್ನೂ ತುಂಬಾ ಜನಕ್ಕೆ ಗೊತ್ತಿಲ್ಲದ ವಿಷಯ ಅಂದರೆ, ಉಮಾ ಭಾರತಿಯವರಿಗೆ ಸನ್ಯಾಸ ದೀಕ್ಷೆ ಕೊಟ್ಟವರು ಪೇಜಾವರರೇ.
ಅವರ ಆ ವಯಸ್ಸಿನಲ್ಲೂ ಪ್ರತಿ ಏಕಾದಶಿಯ ಭಜನೆ ಮತ್ತು ಹರಿವಾಣ ಸೇವೆ ಇಂದಿಗೂ ಅದ್ಭುತವೇ ಸರಿ.
ಮಠದ ಶಿಷ್ಯನಾಗಿದ್ದ ನನ್ನನು ಮತದ ಶಿಷ್ಯನಾಗಿ ಮಾಡಿದ ನನ್ನ ಗುರುಗಳು.
ನನ್ನಲ್ಲಿ ಎಲ್ಲಾ ವಿಚಾರಗಳ, ಅದು ಧಾರ್ಮಿಕವಾಗಿದ್ದೆ ಇರಲಿ ಸಾಮಾಜಿಕವಾಗಿದ್ದೆ ಇರಲಿ, ಕಾಣದೆ ಸ್ಪೂರ್ಥಿಯಾಗಿದ್ದ ನನ್ನ ಗುರುಗಳು.
ಅವರ ಪ್ರಭಾವ ಎಷ್ಟು ಇತ್ತೆಂದರೆ ಉಡುಪಿ ಅಂದ ಕೂಡಲೇ ನೆನಪಾಗುತಿದದ್ದು ಶ್ರೀಕೃಷ್ಣ, ಹಾಗು ಪೇಜಾವರರು.
ವ್ಯಾಸರಾಜರು ಹ್ಯಾಗೆ ತಿರುಪತಿಯ ವೆಂಕಟರಮಣ್ಣನ ಪೂಜಿಸಿದ್ದರೋ ಅದೇ ರೀತಿ ನನ್ನ ಗುರುಗಳು ಅಯೋಧ್ಯೆಯ ರಾಮನನ್ನು ಪೂಜಿಸಬೇಕಿತ್ತು ಅನ್ನುವ ಆಸೆ ಇತ್ತು.
ಅವರ ಮುಗ್ಧ ನಗು, ಆ ಬೆಟ್ಟದ ಪಾಂಡಿತ್ಯ ಎಲವೂ ಇವತ್ತು ಬರಿಯ ನೆನಪು.
ನಾನೇನು ಅವರ ಮಠದ ಶಿಷ್ಯನಲ್ಲ,
ಅವರ ಬಳಿ ವೇದಶಾಸ್ತ್ರ ಕಲಿತ ಶಿಷ್ಯನೂ ಅಲ್ಲಾ,
ಗೊತ್ತೋ ಗೊತ್ತಿಲದೋ ಅವರ ಗರಡಿಯಲ್ಲಿ ಓದಿ ಬೆಳೆದ ಮಧ್ವ ಮಂಡಲದ ವಿಧ್ಯಾರ್ಥಿನು ಅಲ್ಲಾ,
ಅವರ ಸಾಮಾಜಿಕ ಕಳಕಳಿಗೆ ಮನಸೋತ ಅವರ ಅನುಯಾಯಿನೂ ಅಲ್ಲಾ.
ಅವರು ಎಂದಿಗೂ ನನಗೆ "ಸಾಮ್ರಾಟರು".
ಇಂದಿನ ಕಾಲದ ಯತಿಚಕ್ರವರ್ತಿಯು ಹೌದು, ನನ್ನ ಗುರುಗಳು! ನಮ್ಮ ಗುರುಗಳು!!
ನನ್ನ ಗುರುಗಳಿಗೆ ನಾನು ಬರೆದ ಈ ಪುಟ್ಟ ಲೇಖನವನ್ನು ಸಮರ್ಪಿಸುತ್ತೇನೆ.
ಶ್ರೀ ಕೃಷ್ಣಾರ್ಪಣಮಸ್ತು.
-ವಿಶ್ವಸಂತ ವಿಶ್ವೇಶತೀರ್ಥರ ಭಕ್ತ
ಅನಿರುದ್ಧ ಪದಕಿ